ಕಾವ್ಯಸಂಕ್ರಾಂತಿ

ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ … Continue reading ಕಾವ್ಯಸಂಕ್ರಾಂತಿ